Press Release: BIFFES Delegate Registration via Cash payment from 19th to 21st Feb 2020

ಪತ್ರಿಕಾ ಪ್ರಕಟಣೆ

ಫೆಬ್ರವರಿ 18, 2020
12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರತಿನಿಧಿಗಳಾಗಿ ಜಾಲತಾಣದ ಮೂಲಕ ನೊಂದಾಯಿಸಲು ಕೆಲವು ಮಂದಿ ಸಿನಿಮಾಸಕ್ತರಿಗೆ ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ಪರಿಗಣಿಸಿ, ಚಿತ್ರೋತ್ಸವದ ಕಾರ್ಯಾಲಯ, ಕರ್ನಾಟಕ ಚಲನಚಿತ್ರ ಅಕಾಡೆಮಿ, ಕನ್ನಡ ಚಲನಚಿತ್ರ ಅಮೃತೋತ್ಸವ ಭವನ, #20/ಎ, ವರ್ತುಲ ರಸ್ತೆ, ಎಂಐಜಿ ಬ್ಲಾಕ್, ನಂದಿನಿ ಬಡಾವಣೆ, ಬೆಂಗಳೂರು, (ದೂರವಾಣಿ :080 2349 4255) ಇಲ್ಲಿ ದಿನಾಂಕ 19/02/2020 ರಿಂದ 21/02/2020ರ ವರೆಗೆ, ಮೂರು ದಿನಗಳ ಕಾಲ ನಗದು ಮೂಲಕ ನೊಂದಾಯಿಸಿಕೊಳ್ಳುವ ವ್ಯವಸ್ಥೆಯನ್ನು ಮಾಡಲಾಗಿದೆ.

ನೊಂದಾಯಿಸಿಕೊಂಡ ಪ್ರತಿನಿಧಿಗಳು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸುಚಿತ್ರ ಚಿತ್ರ ಸಮಾಜ ಇಲ್ಲವೇ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದಿನಾಂಕ: 22 ರಿಂದ 25ರ ವರೆಗೆ, ಅಕಾಡೆಮಿ ಕಾರ್ಯಾಲಯದಲ್ಲಿ 26ರ ವರೆಗೆ, ಮೊದಲೇ ನಿಗದಿ ಪಡಿಸಿ, ತಮ್ಮ ಕಾರ್ಡನ್ನು ಪಡೆಯಬಹುದು. 27ರಿಂದ ಓರಿಯಾನ್ ಮಾಲ್ ನಲ್ಲಿ ಪಡೆಯಬಹುದು.

ಜಾಲತಾಣ ಸಂಪರ್ಕ ಇಲ್ಲದವರು, ಡಿಜಿಟಲ್ ವ್ವವಹಾರಗಳಿಂದ ದೂರವಿರುವವರು ಈ ಅವಕಾಶವನ್ನು ಬಳಸಿಕೊಳ್ಳಬಹುದು.

——————-

PRESS RELEASE

Benglauru, 18-02-2020
A special registration counter will function at the festival office, Karnataka Chalanachitra Academy, Kannada Chalanachitra Amrutotsava Bhavana Complex, #20 A, Circular Road, MIG Block, Nandini Layout, Bengaluru, (Phone : 23494255) from 19th to 21st February, 2020, to facilitate the non tech-savvy film buffs, where they can register as delegates for the 12th Bengaluru International Film festival, by paying cash.

Those who register can collect their cards from Information and Public Relations Dept, Suchitra Film Society and Karnataka Film Chamber Of Commerce up to 24th February, From Festival Office up to 25th and Orion Mall 27th onwards.

Film enthusiasts can avail this facility.