ಕರ್ನಾಟಕ ಚಲನಚಿತ್ರ ಅಕಾಡೆಮಿಯ ಎಲ್ಲಾ ಪ್ರಕಟಣೆಗಳು ಶೇ.25% ರಿಯಾಯಿತಿ ದರದಲ್ಲಿ ಲಭ್ಯ

14 ಡಿಸೆಂಬರ್ 2018, ಬೆಂಗಳೂರು
ಧಾರವಾಡದಲ್ಲಿ 2019ರ ಜನವರಿ 4, 5 ಮತ್ತು 6ರಂದು ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಎಲ್ಲಾ ಪ್ರಕಟಣೆಗಳನ್ನು ಶೇ.25% ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಅಕಾಡೆಮಿಯಿಂದ ಪ್ರತ್ಯೇಕವಾದ ಮಳಿಗೆಯನ್ನು ತೆರೆಯಲಾಗುವುದು. ಎಲ್ಲಾ ಸಿನಿಮಾ ಸಾಹಿತ್ಯಾಸಕ್ತರು ಈ ಸೌಲಭ್ಯವನ್ನು ಬಳಸಿಕೊಳ್ಳಬೇಕಾಗಿ ಅಕಾಡೆಮಿಯ ಪತ್ರಿಕಾ ಪ್ರಕಟಣೆ ತಿಳಿಸಿದೆ.